ಇತ್ತೀಚಿನ ದಿನಗಳಲ್ಲಿ ರೈತರು ಕೆಲವು ಆರ್ಥಿಕವಾಗಿ ಪ್ರಮುಖವಾದ ತೋಟಗಾರಿಕೆ ಬೆಳೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಇದು ಕೃಷಿ ಅರಣ್ಯ ವ್ಯವಸ್ಥೆಗೆ ಅತ್ಯಂತ ಪ್ರಮುಖ ಅಂಶವೂ ಆಗಿದೆ. ಇಂಥ ಬೆಳೆಗಳ ಪೈಕಿ ರೈತರಲ್ಲಿ ಹಾಗೂ ಕಾರ್ಪೊರೇಟ್‌ ಸಮುದಾಯಗಳಲ್ಲಿ ತನ್ನ ಹೆಚ್ಚು ಆರ್ಥಿಕ ಮೌಲ್ಯದಿಂದಾಗಿ ಹೆಚ್ಚು ಗಮನ ಸೆಳೆಯುತ್ತಿರುವುದು ಶ್ರೀಗಂಧವಾಗಿದೆ. ವಿಶ್ವದಲ್ಲಿ ಪೂರ್ವ ಭಾರತೀಯ ಶ್ರೀಗಂಧವನ್ನು ರಫ್ತು ಮಾಡುವಲ್ಲಿ ಭಾರತ ಪ್ರಮುಖ ದೇಶವಾಗಿದ್ದು, ಒಡ್ಡು ಜಾಗತಿಕ ಉತ್ಪಾದನೆಯಲ್ಲಿ ಶೇ. 90 ರಷ್ಟನ್ನು ಒಳಗೊಂಡಿದೆ. ಬಹುತೇಕ ಉತ್ಪನ್ನವು ಮುಖ್ಯವಾಗಿ ನೈಸರ್ಗಿಕ ರೂಪದಿಂದಲೇ ಬರುತ್ತವೆ. ಪ್ರಸ್ತುತ ಶ್ರೀಗಂಧದ ಮರಗಳ ವಿಪರೀತ ಬಳಕೆಯಿಂದಾಗಿ ಇವುಗಳ ಮೇಲೆ ಒತ್ತಡವೂ ಹೆಚ್ಚಿದೆ. ಅದರಲ್ಲೂ, ಬೆಳೆಯುವ ಪ್ರಮಾಣ ಕೊರತೆ, ಅಗ್ನಿ ಆಕಸ್ಮಿಕಗಳು, ರೋಗಗಳು ಮತ್ತು ಭೂಮಿ ಬಳಕೆ ವಿಧಾನದಲ್ಲಿ ಬದಲಾವಣೆಯಾಗಿರುವುದರ ಜೊತೆಗೆ ರಫ್ತು ಮೌಲ್ಯವೂ ವಿಪರೀತ ಹೆಚ್ಚಳವಾಗಿದೆ.
ಶ್ರೀಗಂಧದ ಉತ್ಪಾದನೆ ಪ್ರತಿ ವರ್ಷಕ್ಕೆ 400 ರಿಂದ 500 ಟನ್ಗಳಿಗೆ ಇಳಿಕೆಯಾಗಿದೆ. ಆದರೆ ಜಾಗತಿಕ ಬೇಡಿಕೆಯು ಪ್ರತಿ ವರ್ಷ ಮರಕ್ಕಾಗಿ 5000 ರಿಂದ 6000 ಟನ್ಗಳು ಹಾಗೂ ತೈಲಕ್ಕೆ 100-120 ಟನ್ಗಳಿಗೆ ಏರಿಕೆಯಾಗಿದೆ.

 

(ಶ್ರೀಗಂಧದ ಸಂರಕ್ಷಣೆ, ಸುಧಾರಣೆ, ನಾಟಿ ಮತ್ತು ನಿರ್ವಹಣೆಯ ಬಗ್ಗೆ ರಾಷ್ಟ್ರೀಯ ಸೆಮಿನಾರ್‌ನ ವಿವರಗಳು (ಇಡಿಎಸ್‌ ಗೈರೋಲಾ, ಎಸ್‌ ಇತರರು) 12-13 ಡಿಸೆಂಬರ್ 2007, ಪುಟ 1-8)

 

ನೈಸರ್ಗಿಕ ಸಂಗ್ರಹದ ಕೊರತೆಯಿಂದಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧದ ಬೆಲೆ ಹಲವು ಪಟ್ಟು ಹೆಚ್ಚಾಗಿದೆ ಮತ್ತು ಈಸ್ಟ್ ಇಂಡಿಯನ್ ಶ್ರೀಗಂಧವು ತನ್ನ ಹೆಚ್ಚು ವಾಣಿಜ್ಯಿಕ ಮೌಲ್ಯದಲ್ಲಿ ಪ್ರಮುಖ ಸ್ಥಾನವನ್ನು ಕಾಯ್ದುಕೊಂಡಿದೆ.

 

 ಈಸ್ಟ್ ಇಂಡಿಯನ್ ಶ್ರೀಗಂಧ (ಸಾಂತಾಲಮ್‌ ಆಲ್ಬಮ್‌ ಎಲ್‌.) ಅತ್ಯಂತ ಅಮೂಲ್ಯ ಮರವಾಗಿದ್ದು, ಅದು ಸುಗಂಧ ಮತ್ತು ವಾಣಿಜ್ಯಿಕ ಮೌಲ್ಯಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಸರಾಗಿದೆ. ಇದರ ಜೊತೆಗೆ, ವಿವಿಧ ರೀತಿಯ ವಾತಾವರಣ, ಆಶ್ರಯ ಮತ್ತು ಮಣ್ಣಿನ ಸ್ಥಿತಿಗಳಿಗೆ ಹೊಂದಿಕೊಳ್ಳುವಿಕೆಯಿಂದಾಗಿ ವಾಣಿಜ್ಯಿಕವಾಗಿ ರೈತರನ್ನು ಮತ್ತು ಕಾರ್ಪೊರೇಟ್‌ ವಲಯವನ್ನು ಆಕರ್ಷಿಸಿದೆ.

 

ಶ್ರೀಗಂಧವು ಸಣ್ಣ ಬೇರಿನ ಪರಾವಲಂಬಿಯಾಗಿದ್ದು, ಪರಾವಲಂಬಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವಿಕೆಯನ್ನು ಆಧರಿಸಿ ಶ್ರೀಗಂಧದ ತೋಟಗಾರಿಕೆಯು ಯಶಸ್ವಿಯಾಗುತ್ತದೆ. ಅದರಲ್ಲೂ ವಿಶೇಷವಾಗಿ, ಆಶ್ರಯ ಮತ್ತು ಪರಾವಲಂಬಿಯ ಮಧ್ಯದ ಸಂಬಂಧಗಳು, ಅವುಗಳ ಅನುಪಾತ ಮತ್ತು ಇತರ ವೃಕ್ಷಪಾಲನೆ ತಂತ್ರಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಲ್ಲಿ ಇದು ಯಶಸ್ವಿಯಾಗುತ್ತದೆ. ಶ್ರೀಗಂಧವು ಅಡ್ಡ ಬೇರುಗಳ ಮೂಲಕ ಖನಿಜ ಪೋಷಕಾಂಶಗಳು ಮತ್ತು ನೀರನ್ನು ಆಶ್ರಯ ಸಸ್ಯಗಳಿಂದ ಪಡೆಯುತ್ತದೆ. ಇದು ಪರಾವಲಂಬಿ ಮತ್ತು ಆಶ್ರಯದ ಸಸ್ಯಶಾಸ್ತ್ರೀಯ ಸೇತುವೆಯಾಗಿ ಕೆಲಸ ಮಾಡುತ್ತದೆ. ಹುಲ್ಲಿನಿಂದ ಮರಗಳವರೆಗೆ ವಿವಿಧ ಸಸ್ಯಗಳಿಗೆ ಇದು ಅವಲಂಬನೆ ನೀಡುತ್ತದೆ ಮತ್ತು ಬೀಜಗಳ ಮೂಲಕ ಸಂಬಂಧ ಬೆಸೆಯುವಿಕೆಯು ಇದೆಲ್ಲಕ್ಕಿಂತ ಪ್ರಮುಖವಾಗಿರುತ್ತದೆ. ಆಳವಾಗಿ ಬೇರು ಹೊಂದಿರುವ ಮತ್ತು ನಿಧಾನವಾಗಿ ಬೆಳೆಯುವ ಸರ್ವಋತು ಆಶ್ರಯ ಸಸ್ಯಗಳು ಸುಸ್ಥಿರ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಮರ ಮತ್ತು ತೈಲದ ಉತ್ತಮ ಫಸಲಿಗಾಗಿ, ನಾವು 15 ವರ್ಷಗಳವರೆಗೆ ಇದನ್ನು ಬೆಳೆಯಬೇಕು. ಸಾಮಾನ್ಯ ಕ್ರಮಾವರ್ತನ ವಯಸ್ಸು 25-30 ವರ್ಷಗಳಾಗಿರುತ್ತವೆ.

 

ಶ್ರೀಗಂಧವು ನೈಸರ್ಗಿಕವಾಗಿ ಹಲವು ವಲಯಗಳಲ್ಲಿ ಕಂಡುಬರುತ್ತವೆ. ಉದಾ., ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ಹವಾಯಿ, ಶ್ರೀಲಂಕಾ ಮತ್ತು ಇತರ ಪೆಸಿಫಿಕ್‌ ದ್ವೀಪಗಳು. ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಇದು ನೆಲಮೂಲದ್ದಾಗಿದೆ. ಈಸ್ಟ್ ಇಂಡಿಯನ್ ಶ್ರೀಗಂಧ ಎಂದು ಕರೆಯಲಾಗುವ ಭಾರತದ ಶ್ರೀಗಂಧದ ತೈಲ ಮತ್ತು ಕಟ್ಟಿಗೆಗೆ ವಿಶ್ವ ಮಾರುಕಟ್ಟೆಯಲ್ಲಿ ಭಾರಿ ಮೌಲ್ಯವಿದೆ. ಹಳದಿ ಬಣ್ಣದಲ್ಲಿರುವ ಸುಗಂಧಭರಿತ ತೈಲವನ್ನು ಕಟ್ಟಿಗೆಯಿಂದ ಮತ್ತು ಬೇರಿನಿಂದಲೂ ತೆಗೆಯಲಾಗುತ್ತದೆ. ಶ್ರೀಗಂಧದಿಂದ ತಯಾರಿಸಿದ ಸಾಮಗ್ರಿಗಳಲ್ಲಿ ಶ್ರೀಗಂಧದ ಸುಗಂಧ ದಶಕಗಳ ವರೆಗೆ ಇರುತ್ತದೆ. ಇದು ಸರ್ವಋತು ಹಸಿರು ಮರವಾಗಿದ್ದು, ನಿಧಾನವಾಗಿ ಬೆಳೆಯುತ್ತದೆ. 10 ರಿಂದ 15 ಮೀ. ಸುತ್ತಳತೆಯವರೆಗೆ 1 ರಿಂದ 2.5 ಮೀ. ಎದೆಯ ಎತ್ತರಕ್ಕೆ ಬೆಳೆಯುತ್ತದೆ. ಮರವು ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಂತಕ್ಕೆ ಬರಲು ಸುಮಾರು 15 ವರ್ಷಗಳು ಬೇಕಾಗುತ್ತವೆ. ಆದರೆ, ಫಲವತ್ತಾದ ಪ್ರದೇಶದಲ್ಲಿ ವಾಣಿಜ್ಯಿಕ ಮೌಲ್ಯವನ್ನು ಸಸ್ಯ ಪಡೆಯುವುದಕ್ಕೆ ಸುಮಾರು 20 ವರ್ಷಗಳು ಬೇಕಾಗುತ್ತವೆ. ಎಲೆಗಳು ರಬ್ಬರ್‌ನಂತಿರುತ್ತವೆ ಮತ್ತು ಕಾಂಡದ ಎರಡೂ ಬದಿಯಲ್ಲಿ ಒಂದೇ ತೆರನಾಗಿರುತ್ತದೆ. ಪಕ್ವವಾದ ಎಲೆಗಳು ನೀಲಿಯಿಂದ ಹಸಿರು-ಹಳದಿ ಬಣ್ಣದಲ್ಲಿದ್ದರೆ, ಹೊಸ ಎಲೆಗಳು ತಿಳಿಗುಲಾಬಿಯುಳ್ಳ ಹಸಿರು ಬಣ್ಣದಲ್ಲಿರುತ್ತದೆ. ಇದರಿಂದ ಸಸ್ಯ ಎಂದಿಗೂ ಹಸಿರಾಗಿಯೇ ಇರುತ್ತದೆ. ಚಿಕ್ಕ ಸಸ್ಯದ ಕಾಂಡವು ಕೆಂಪು-ಕಂದು ಬಣ್ಣದಲ್ಲಿರುತ್ತದೆ ಮತ್ತು ಮೃದುವಾಗಿರುತ್ತವೆ. ಬೆಳೆದ ಮರಗಳು ಗಡುಸಾದ, ಕಡು ಕಂದು ಬಣ್ಣವನ್ನು ಹೊಂದಿರುತ್ತವೆ ಮತ್ತು ಆಳವಾದ ಲಂಬ ಬಿರುಕುಗಳು ಇರುತ್ತವೆ. ಕಾಂಡದ ಒಳ ಭಾಗವು ಕೆಂಪಾಗಿರುತ್ತವೆ. ಸಸ್ಯವು ಇತರ ಪ್ರಭೇದದ ಮರಗಳ ಬೇರುಗಳಿಗೆ ಅರೆ ಪರಾವಲಂಬಿಯಾಗಿರುತ್ತದೆ. ಮರದ ಬೇರುಗಳು ಅಗಲವಾಗಿ ಹರಡಿರುತ್ತವೆ ಮತ್ತು ಸಮೀಪದ ಮರದ ಬೇರುಗಳಿಗೆ ಕಸಿಯಾಗುತ್ತದೆ. ಸಮೀಪದ ಮರಗಳ ಬೇರುಗಳಿಗೆ ಇದು ತನ್ನ ಬೇರುಗಳನ್ನು ಜೋಡಿಸಿಕೊಂಡು, ತನ್ನ ಬೆಳವಣಿಗೆಗೆ ನೀರು ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ. ಮರದಲ್ಲಿ ಹೂ ಬಿಡುವಿಕೆಯು ಅಕ್ಷಾಂಶವನ್ನು ಅಧರಿಸಿರುತ್ತದೆ. ಮೇಲಿನ ಅಕ್ಷಾಮಶದಲ್ಲಿ ಬೆಳೆಯುವ ಮರಗಳಿಗೆ ಹೋಲಿಸಿದರೆ ಕೆಳ ಅಕ್ಷಾಂಶದಲ್ಲಿ ಬೆಳೆಯುವ ಮರದಲ್ಲಿ ಒಂದು ತಿಂಗಳು ಮೊದಲೇ ಹೂಬಿಡಲು ಆರಂಭವಾಗುತ್ತದೆ. ಹೊಸ ಹೂವುಗಳು ಹಳದಿಯಾಗಿರುತ್ತವೆ ಮತ್ತು ಬೆಳೆದ ಹಾಗೆ ನೇರಳೆ-ಕಂದು ಬಣ್ಣಕ್ಕೆ ತಿರುಗುತ್ತದೆ. ಮೊಗ್ಗಿನಿಂದ ಹೂವಾಗುವಿಕೆಗೆ ಒಂದು ತಿಂಗಳು ಬೇಕಾಗುತ್ತದೆ ಮತ್ತು ಆರಂಭದ ಹಂತದಿಂದ ಹಣ್ಣಾಗುವವರೆಗೆ ಒಟ್ಟು ಮೂರು ತಿಂಗಳುಗಳು ಬೇಕಾಗುತ್ತವೆ. ಶ್ರೀಗಂಧದ ಮರಗಳು ವಿವಿಧ ವಾತಾವರಣ ಮತ್ತು ಹವಾಮಾನ ಸ್ಥಿತಿಯಲ್ಲಿ ಚೆನ್ನಾಗಿ ಬೆಳೆಯುತ್ತವೆ.

 

ಶ್ರೀಗಂಧದ ವೈಜ್ಞಾನಿಕ ಹೆಸರು ಸಾಂಟಾಲಮ್‌ ಆಲ್ಬಮ್‌. ಇದು ಸಾಂಟಾಲಸಾಯಿ ಪ್ರಭೇದಕ್ಕೆ ಇದು ಸೇರಿದೆ.

 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪ್ರಭೇದವೆಂದರೆ:

 

ಸಾಂಟಾಲಮ್‌ ಆಲ್ಬಮ್ (ಈಸ್ಟ್ ಇಂಡಿಯನ್‌ ಶ್ರೀಗಂಧ) – ಇದು ಇಂಡೋನೇಷ್ಯಾ ಮತ್ತು ಭಾರತ ಮೂಲದ್ದಾಗಿದೆ ಮತ್ತು ಉತ್ತರ ಆಸ್ಟ್ರೇಲಿಯಾದ ಮೇಲ್ಭಾಗದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ ಎಂದು ಊಹಿಸಲಾಗಿದೆ. ಐತಿಹಾಸಿಕವಾಗಿ, ಎಸ್‌ ಆಲ್ಬಮ್‌ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಗಂಧ ಪ್ರಭೇದವನ್ನು ಉಲ್ಲೇಖಿಸುತ್ತದೆ. ಮೂಲ ಆವಾಸದಲ್ಲಿ ಈ ಪ್ರಭೇದವು ವಾಣಿಜ್ಯಿಕವಾಗಿ ವಿನಾಶದಂಚಿಗೆ ಸಾಗುತ್ತಿದೆ. ಬಹುತೇಕ ಭವಿಷ್ಯದ ಪೂರೈಕೆಯು ಉತ್ತರ ಆಸ್ಟ್ರೇಲಿಯಾದಿಂದ ಬರುತ್ತಿದೆ. (ಅಲ್ಲದೆ ಏಷ್ಯಾದ ಹಲವು ಸಮಶೀತೋಷ್ಣ ದೇಶಗಳಲ್ಲಿ ಬೆಳೆದ ತೋಟಗಳಿಂದ ಬರುತ್ತಿದೆ.)

 

ಎಸ್‌ ಸ್ಪಿಕಾಟಂ (ಆಸ್ಟ್ರೇಲಿಯನ್‌ ಶ್ರೀಗಂಧ) – ಇದು ನೈಋತ್ಯ ಆಸ್ಟ್ರೇಲಿಯಾ ಮೂಲದ್ದಾಗಿದೆ. ಡಬ್ಲ್ಯೂಎ ಅಧಿಕಾರಿಗಳು ಹೆಚ್ಚು ಸುಸ್ಥಿರ ನಿರ್ವಹಣೆ ಮಾಡಬಹುದು ಎಂಬ ಕಾರಣಕ್ಕೆ ಇತ್ತೀಚಿನ ದಶಕಗಳಲ್ಲಿ ಅತಿ ಹೆಚ್ಚು ವ್ಯಾಪಾರವಾದ ಶ್ರೀಗಂಧ ಇದಾಗಿದೆ. ಆದರೆ, ಇದರ ತೈಲಕ್ಕೆ ಹೆಚ್ಚು ಬೆಲೆಯಿಲ್ಲ. ಯಾಕೆಂದರೆ, ಇದರಲ್ಲಿ ಕಡಿಮೆ ಶೇಕಡಾವಾರು ಸ್ಯಾಂಟಾಲಾಲ್ಸ್‌ ಇದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇ, ಇ ಫರ್ನೆಸೋಲ್‌ ಇದೆ. ಆದರೆ, ಇದು ಅಗರಬತ್ತಿಗಳು, ಮರ ಮತ್ತು ಇತರೆಗೆ ಇದು ಸೂಕ್ತವಾಗಿದೆ.

 

ಎಸ್‌.ಆಸ್ಟ್ರೋಕಲೆಡೋನಿಕಮ್ (ಶ್ರೀಗಂಧ) – ನ್ಯೂ ಕಲೆಡೋನಿಯಾ ಮತ್ತು ವನೌತು ಮೂಲ. ತಳಿಗಳನ್ನು (ವನೌತು ದೇಶದಲ್ಲಿನ ಸಾಂಟೋ ಮತ್ತು ಮಲೆಕುಲಾ ಮತ್ತು ನ್ಯೂ ಕಲೆಡೋನಿಯಾದಲ್ಲಿನ ಐಲ್ ಆಫ್ ಪೈನ್ಸ್‌) ಆಧರಿಸಿ ತೈಲದ ಗುಣಮಟ್ಟ ಬದಲಾಗುತ್ತದೆ. ಈಸ್ಟ್ ಇಂಡಿಯನ್ ಶ್ರೀಗಂಧದ ತೈಲಕ್ಕೆ ಹೋಲಿಸಿದರೆ ಕೆಲವು ಅಧಿಕ ಗುಣಮಟ್ಟದ ತೈಲವನ್ನು ಹೊಂದಿವೆ.

 

ಎಸ್‌.ಯಾಸಿ (ಯಾಸಿ ಅಥವಾ ಆಹಿ) – ಫಿಜಿ, ಟಾಂಗಾ ಮತ್ತು ನಿಯುವೆ ಮೂಲ. ಇದು ಉತ್ತಮ ಗುಣಮಟ್ಟದ ಕಟ್ಟಿಗೆ ಮತ್ತು ತೈಲವನ್ನು ಉತ್ಪಾದಿಸುತ್ತದೆ. ಈಸ್ಟ್ ಇಂಡಿಯನ್ ಶ್ರೀಗಂಧದ ಐಎಸ್‌ಒ ಮಾನದಂಡವನ್ನು ಇದು ಪೂರೈಸುತ್ತದೆ. ಇ, ಇ ಫರ್ನೆಸೋಲ್‌ ಮಟ್ಟವು ತೈಲದಲ್ಲಿ 2-3% ಪ್ರಮಾಣದಲ್ಲಿ ಇರುತ್ತದೆ ಎಂದು ಸೀಮಿತ ವಿಶ್ಲೇಷಣೆಗಳು ಸಲಹೆ ಮಾಡಿವೆ. ಆದರೆ, ಪರ್ಫ್ಯೂಮ್ ಮತ್ತು ದೇಹದ ಆರೈಕೆ ಉತ್ಪನ್ನಗಳಲ್ಲಿ ಯುರೋಪ್‌ನಲ್ಲಿ ಎಸ್‌. ಯಾಸಿ ತೈಲದ ಬಳಕೆಯು ಇದರಲ್ಲಿರುವ ಚರ್ಮ ಅಲರ್ಜಿಕಾರಕ ಅಂಶಗಳು ಮಿತಿಗೊಳಿಸುತ್ತವೆ.

 

ಎಸ್‌. ಪನಿಕ್ಯುಲಾಟಮ್ (ಇಲಿಯಾಹಿ) – ಹವಾಯಿ ಮೂಲ.

 

ಶ್ರೀಗಂಧದ ನಾಟಿ:

 

ಶ್ರೀಗಂಧ ಬೆಳೆಯುವ ಪರಿಸ್ಥಿತಿಗಳು. ಮಧ್ಯಮ ಪ್ರಮಾಣದ ಮಳೆ, ಸಂಪೂರ್ಣ ಬಿಸಿಲು ಮತ್ತು ವರ್ಷದ ಬಹುತೇಕ ಸಮಯದಲ್ಲಿ ಒಣ ಹವೆ ಇರುವ ಸ್ಥಳಗಳಲ್ಲಿ ಇದನ್ನು ಬೆಳೆಯಬಹುದು. ಉಷ್ಣತೆ ಹೆಚ್ಚಿರುವ ಸಮಶೀತೋಷ್ಣ ಅಥವಾ ಅರೆ ಸಮಶೀತೋಷ್ಣ ಪ್ರದೇಶಗಳಲ್ಲಿ ಇವು ಉತ್ತಮವಾಗಿ ಬೆಳೆಯುತ್ತವೆ. ಮರಳು, ಕೆಂಪು ಮಣ್ಣು ಮತ್ತು ಕಪ್ಪು ಮಣ್ಣಿನಂತಹ ವಿವಿಧ ಮಣ್ಣಿನ ಸ್ಥಿತಿಯಲ್ಲಿ ಶ್ರೀಗಂಧದ ಮರಗಳು ಚೆನ್ನಾಗಿ ಬೆಳೆಯುತ್ತವೆ. 6.0 ಇಂದ 7.5 ಪಿಎಚ್‌ ಹೊಂದಿರುವ ಕೆಂಪು ಫರ್ರುಗಿನ ಲೋಮ್‌ ಮಣ್ಣು ಇದಕ್ಕೆ ಸೂಕ್ತವಾದುದು. ಕಲ್ಲಿನಿಂದ ಕೂಡಿದ ಮಣ್ಣು, ಕಲ್ಲಿನ ಪ್ರದೇಶ, ಅಧಿಕ ಗಾಳಿ, ತೀವ್ರ ಉಷ್ಣತೆ ಮತ್ತು ಬರ ಪ್ರದೇಶಗಳಲ್ಲೂ ಶ್ರೀಗಂಧ ಬದುಕುಳಿಯುತ್ತದೆ. ಸೂರ್ಯನ ಬಿಸಿಲನ್ನು ಇದು ಬಯಸುತ್ತದೆಯಾದರೂ, ಭಾಗಶಃ ನೆರಳಿನಲ್ಲೂ ಇದು ಬೆಳೆಯುತ್ತದೆ. ಇವು 13° ರಿಂದ 36° ಸೆಂ. ತಾಪಮಾನದಲ್ಲಿ ಮತ್ತು 825 ರಿಂದ 1175 ಮಿಲಿಮೀಟರ್ ಮಳೆ ಬೀಳುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಶ್ರೀಗಂಧವು ಸೂಕ್ಷ್ಮವಾದ ಮರವಾಗಿದೆ ಮತ್ತು ನೀರು ಕಟ್ಟಿಕೊಳ್ಳುವಿಕೆಯನ್ನು ಸಹಿಸಿಕೊಳ್ಳುವುದಿಲ್ಲ. 1960 ರಿಂದ 3450 ಅಡಿ ಎತ್ತರದ ಭೂಪ್ರದೇಶವು ಉತ್ತಮ ಬೆಳವಣಿಗೆಗೆ ಸೂಕ್ತವಾಗಿದೆ.

 

ಇತರ ಸಸ್ಯಗಳಿಗಿಂತ ಭಿನ್ನವಾಗಿ, ಶ್ರೀಗಂಧ ಪ್ಲಾಂಟೇಶನ್‌ಗಳಿಗೆ ಸರಿಯಾದ ಸಸ್ಯ ಬೆಳವಣಿಗೆ ಸ್ಥಳ ಬೇಕಾಗುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಇಳಿಜಾರು ಹೊಂದಿರುವ ಮತ್ತು ಉತ್ತಮ ಸೂರ್ಯನ ಬೆಳಕು ಹೊಂದಿರುವ ಭೂಮಿ ಅತ್ಯಂತ ಸೂಕ್ತವಾಗಿದೆ. ನೀರು ಸುಲಭವಾಗಿ ಬಸಿದುಹೋಗುವ ಸ್ಥಳವು ಪ್ಲಾಂಟೇಶನ್‌ಗಳಿಗೆ ಸೂಕ್ತವಾಗಿದೆ. 40 ಸೆಂ.ಮೀ ಆಳಕ್ಕೆ ಭೂಮಿಯನ್ನು ಉಳುಮೆ ಮಾಡಬೇಕು. ಬೇರು ಸರಿಯಾಗಿ ಬೆಳೆಯುವುದಕ್ಕೆ ಅನುವು ಮಾಡುವಂತೆ ಮಣ್ಣನ್ನು ಕೆಲವು ಬಾರಿ ಆಳವಾಗಿ ಉಳುಮೆ ಮಾಡಿ ಸಿದ್ಧಪಡಿಸಿ. ಕೊನೆಯ ಉಳುಮೆ ವೇಳೆ ಸಾಕಷ್ಟು ಪ್ರಮಾಣದ ಕೃಷಿ ಗೊಬ್ಬರವನ್ನು ಹಾಕಿ. ಸ್ಥಳದಲ್ಲಿನ ಎಲ್ಲ ಕಳೆಯನ್ನೂ ತೆಗೆದುಹಾಕಿ. ಆಶ್ರಯವಾಗಿ ಕೆಲಸ ಮಾಡಬಹುದಾದ ಸಸ್ಯಗಳನ್ನು ಉಳಿಸಿಕೊಳ್ಳಿ.

 

ಬೀಜ ಅಥವಾ ಸಸ್ಯ ಕಸಿಯ ಮೂಲಕ ನಾವು ಶ್ರೀಗಂಧವನ್ನು ಬೆಳೆಸಬಹುದು. ಬೀಜದ ಮೂಲಕ ಸಸ್ಯವನ್ನು ಬೆಳಸುವಾಗ, 15-20 ವರ್ಷಗಳಷ್ಟು ಹಳೆಯ ಸಸ್ಯಗಳಿಂದ ಬೀಜವನ್ನು ಸಂಗ್ರಹಿಸಬೇಕು. 24 ಗಂಟೆಗಳವರೆಗೆ ನೀರಿನಲ್ಲಿ ನೆನೆಸಬೇಕು ಮತ್ತು ಬಿಸಿಲಿನಲ್ಲಿ ಒಣಗಿಸಿ ಬಿರುಕು ಬಿಡುವಂತೆ ಮಾಡಬೇಕು. ಇದರಿಂದ ಮೊಳಕೆಯೊಡೆಯುವುದು ಸುಲಭವಾಗುತ್ತದೆ

 

ಸಸ್ಯವನ್ನು ಕಸಿ ಮಾಡುವುದು ಅಥವಾ ಏರ್ ಲೇಯರ್ ಮಾಡುವುದು ಅಥವಾ ಬೇರು ಕತ್ತರಿಸುವ ಮೂಲಕ ಸಸ್ಯವನ್ನು ಪಡೆಯಲಾಗುತ್ತದೆ. ಬಹುತೇಕ ವಾಣಿಜ್ಯಿಕವಾಗಿ ಲಭ್ಯವಿರುವ ಶ್ರೀಗಂಧದ ಸಸ್ಯಗಳು ಅಂಗಾಂಶ ಕಸಿ ವಿಧಾನವನ್ನು ಬಳಸುತ್ತವೆ. ಈ ವಿಧಾನವನ್ನು ಮಾಡುವುದು ತುಂಬಾ ಸುಲಭ ಮತ್ತು 60% ಯಶಸ್ಸು ದರವನ್ನು ಹೊಂದಿರುತ್ತವೆ. ಸಸ್ಯ ಬೆಳೆಸುವಿಕೆಯು ನಾಟಿ ಸಮಯವನ್ನು ಆಧರಿಸಿರುತ್ತದೆ. ಮೇ ತಿಂಗಳಿನಲ್ಲಿ ಸಸ್ಯವನ್ನು ಕತ್ತರಿಸುವುದರ ಬದಲಿಗೆ ಏಪ್ರಿಲ್‌ ಆರಂಭದಲ್ಲಿ ಸಸ್ಯ ಕತ್ತರಿಸುವುದು ಹೆಚ್ಚು ಉತ್ತಮವಾಗಿದೆ.

 

ಸಸ್ಯಗಳನ್ನು ಭೂಮಿಗೆ ಬದಲಿಸುವುದಕ್ಕೂ ಸಾಕಷ್ಟು ಮೊದಲೇ ಆಶ್ರಯ ಸಸ್ಯಗಳನ್ನು ಬೆಳೆಸಲಾಗುತ್ತದೆ. ಇದು ಹೊಸ ಶ್ರೀಗಂಧ ಸಸ್ಯಗಳು ಬೇಗ ಆಶ್ರಯ ಪಡೆದುಕೊಳ್ಳಲು ನೆರವಾಗುತ್ತವೆ. ದೇಶಿ ಅಕೇಶಿಯಾ ತಳಿಗಳು, ಕಾಸಾರಿನಾ ಎಸ್‌ಪಿಎಸ್‌, ಕಾಜಾನಸ್‌ ಎಸ್‌ಪಿಎಸ್‌, ಕ್ರೊಟೊನ್ ಮೆಗಾಲೋಕಾರ್ಪಸ್ ಇತ್ಯಾದಿಯು ಶ್ರೀಗಂಧದ ಕೃಷಿಯಲ್ಲಿ ಆಶ್ರಯ ಸಸ್ಯಗಳಾಗಿ ಸೂಕ್ತವಾಗಿವೆ.

 

45 x 45 x 45 ಸೆಂ.ಮೀ ಹೊಂಡಗಳನ್ನು ಕನಿಷ್ಠ 3ಮೀx3ಮೀ ಅಥವಾ 5ಮೀ x 5ಮೀ ಅಂತರದಲ್ಲಿ ಹೊಂಡ ತೆಗೆಯಬೇಕು. ಒಂದು ಎಕರೆಗೆ 450 ರಿಂದ 400 ಶ್ರೀಗಂಧದ ಸಸ್ಯಗಳನ್ನು ನೆಡಬಹುದು. ಪ್ರತಿ ಹೊಂಡಕ್ಕೂ ಕೆಂಪು ಮಣ್ಣು ಮತ್ತು ಕೃಷಿ ಗೊಬ್ಬರ ಅಥವಾ ಕಾಂಪೋಸ್ಟ್‌ ಅನ್ನು 1:2 ಅನುಪಾತದಲ್ಲಿ ಹಾಕಬೇಕು. ಪ್ರತಿ ಸಾಲಿನಲ್ಲಿ ತಲಾ ಐದನೇ ಸಸ್ಯಕ್ಕೆ, ದೀರ್ಘಕಾಲದವರೆಗೆ ಬಾಳುವ ಸಸ್ಯವನ್ನು ನೆಡಬೇಕು ಮತ್ತು ಶ್ರೀಗಂಧದ ಸಸ್ಯದಿಂದ 150 ಸೆಂ.ಮೀ ಅಂತರದಲ್ಲಿ ಒಂದು ಮಧ್ಯಂತರ ಸಸ್ಯವನ್ನು ನೆಡಬೇಕು. ಮಧ್ಯಂತರ ಸಸ್ಯವು ಶ್ರೀಗಂಧದ ಸಸ್ಯಕ್ಕಿಂತ ದೊಡ್ಡದಾಗಬಾರದು. ಹೀಗಾಗಿ, ಇದನ್ನು ಆಗಾಗ್ಗೆ ಕತ್ತರಿಸುತ್ತಿರಬೇಕು. 6 ರಿಂದ 8 ತಿಂಗಳದ ಅಥವಾ 30 ಸೆಂ.ಮೀ ಎತ್ತರದ ಸಸ್ಯಗಳು ಕೃಷಿ ಭೂಮಿಗೆ ಹಸ್ತಾಂತರಿಸಲು ಸೂಕ್ತವಾಗಿವೆ. ಸಸ್ಯಗಳು ಬೂದು ಬಣ್ಣದ ಕಾಂಡವನ್ನು ಹೊಂದಿರಬೇಕು ಮತ್ತು ರೆಂಬೆಗಳು ಉತ್ತಮವಾಗಿ ಬೆಳೆದಿರಬೇಕು.

 

ಮಳೆ ಆಧರಿತ ನಾಟಿಯಲ್ಲಿ ಶ್ರೀಗಂಧ ಉತ್ತಮವಾಗಿ ಬೆಳೆಯುತ್ತದೆ ಮತ್ತು ಬೇಸಿಗೆಯಲ್ಲಿ ನೀರು ಬೇಕಾಗಬಹುದು. ಸಣ್ಣ ಶ್ರೀಗಂಧದ ಸಸ್ಯಗಳಿಗೆ ಬೇಸಿಗೆ ಕಾಲದಲ್ಲಿ 2-3 ವಾರಗಳಿಗೆ ಒಮ್ಮೆ ನೀರು ಕೊಡಬೇಕಾಗುತ್ತದೆ. ಬೇಸಿಗೆ ಮತ್ತು ಬಿಸಿಲಿರುವ ಸಮಯದಲ್ಲಿ ಹನಿ ನೀರಾವರಿ ವ್ಯವಸ್ಥೆಯ ಮೂಲಕ ನೀರು ಕೊಡಬಹುದು ಮತ್ತು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಡಿಸೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ನೀರು ನೀಡಬಹುದು. ಹೌಸ್ಟೋರಿಯಾ ವಿಧಾನದ ಮೂಲಕ ಸಮೀಪದ ಆಶ್ರಯ ಸಸ್ಯದಿಂದ ಮರವು ತನಗೆ ಬೇಕಾದ ಬಹುತೇಕ ಪೋಷಕಾಂಶಗಳನ್ನು ಹೀರಿಕೊಳ್ಳುವುದರಿಂದ, ಅತಿ ಕಡಿಮೆ ಗೊಬ್ಬರವಿದ್ದರೂ ಅವು ಬೆಳೆಯುತ್ತವೆ. ಆದರೆ, ಕಾಂಪೋಸ್ಟ್‌, ಕೊಟ್ಟಿಗೆ ಗೊಬ್ಬರ ಮತ್ತು ಹಸಿರು ಗೊಬ್ಬರದಂತಹ ಸಾವಯವ ಗೊಬ್ಬರಗಳು ಮರದ ಬೆಳವಣಿಗೆಗೆ ಸಹಾಯವಾಗುತ್ತವೆ.

 

ಮೊದಲ ವರ್ಷದಲ್ಲಿ ಹಾಗೂ ನಂತರ ಕಾಲಕಾಲಕ್ಕೆ ಕಳೆ ತೆಗೆಯಬೇಕು. ಇದರಿಂದ ಪೋಷಕಾಂಶ ನಷ್ಟ ಮತ್ತು ಮಣ್ಣಿನಲ್ಲಿ ತೇವಾಂಶ ನಷ್ಟ ಕಡಿಮೆಯಾಗುತ್ತದೆ. ಹೆಚ್ಚುವರಿ ಆದಾಯಕ್ಕಾಗಿ, ಭೂಮಿಯನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳುವುದಕ್ಕಾಗಿ ಮತ್ತು ಮಣ್ಣಿನ ನಿರ್ವಹಣೆಗಾಗಿ ರೈತರು ಮಧ್ಯಂತರ ಬೆಳೆ ಬೆಳೆಯಬಹುದು. ಮಧ್ಯಂತರ ಬೆಳೆಗೆ ತೆಳು ಬೇರುಗಳು ಇರುವ ಅಲ್ಪಾವಧಿ ಬೆಳೆಗಳು ಉತ್ತಮ.

 

ಶ್ರೀಗಂಧದ ಮರಗಳು ಹಲವು ರೀತಿಯ ಕೀಟಗಳ ಬಾಧೆಗೆ ತುತ್ತಾಗುತ್ತವೆ. ಆದರೆ, ಕೆಲವು ಕೀಟಗಳು ಮಾತ್ರ ಮರದ ವಾಣಿಜ್ಯಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ. ಆರಂಭಿಕ ಬೆಳವಣಿಗೆ ವರ್ಷಗಳಲ್ಲಿ ಕೀಟಗಳಿಂದ ಹಾನಿಗೆ ಒಳಗಾಗುವ ಅಪಾಯವನ್ನು ಹೊಂದಿರುತ್ತದೆ.

 

ಶ್ರೀಗಂದದ ಕಟಾವು

 

ಶ್ರೀಗಂಧವನ್ನು ಕಟಾವು ಮಾಡುವುದಕ್ಕೆ 15 ಕ್ಕೂ ಹೆಚ್ಚು ವರ್ಷಗಳು ಆಗಿರಬೇಕು.  30 ಕ್ಕೂ ಹೆಚ್ಚು ವರ್ಷಗಳವರೆಗೆ ಬೆಳೆದ ಮತ್ತು 40 ರಿಂದ 60 ಸೆಂ.ಮೀ ಸುತ್ತಳತೆ ಬೆಳೆದ ಮರಗಳಲ್ಲಿ ತಿರುಳು ಚೆನ್ನಾಗಿ ಉಂಟಾಗಿರುತ್ತದೆ. 50 ರಿಂದ 60 ಸೆಂ.ಮೀ ಸುತ್ತಳತೆಯ ಮರದಿಂದ ಸರಾಸರಿ 20 ರಿಂದ 50 ಕಿಲೋ ತಿರುಳನ್ನು ಪಡೆಯಬಹುದು. ಕಾಂಡ, ಬೇರುಗಳು ಮತ್ತು ರೆಂಬೆಗಳ ಮೇಲಿನ ಭಾಗವನ್ನು ತೆಗೆದು ತಿರುಳನ್ನು ಬೇರ್ಪಡಿಸಲಾಗುತ್ತದೆ. ವಾಣಿಜ್ಯಿಕ ರೈತರು ಶ್ರೀಗಂಧದ ಫಾರಂಗಳನ್ನು ಮಾಡುತ್ತಿದ್ದಾರೆ. 15-25 ಸೆಂ.ಮೀ ಸುತ್ತಳತೆ ಬೆಳೆದ 10-12 ವರ್ಷಗಳ ಮರಗಳನ್ನು ಪ್ರಾಯೋಗಿಕವಾಗಿ ಮೊದಲೇ ಕಟಾವು ಮಾಡುತ್ತಾರೆ. ಸಣ್ಣ ಸಸ್ಯಗಳಿಂದ ಪಡೆದ ತೈಲ ಸಾಮಾನ್ಯವಾಗಿ ಕಡಿಮೆ ಗ್ರೇಡ್ ಹೊಂದಿರುತ್ತದೆ. 13 ವರ್ಷಗಳಷ್ಟು ದೊಡ್ಡ ಮರವು 12% ಅಧಿಕ ಗ್ರೇಡ್‌ನ ಕಟ್ಟಿಗೆಯನ್ನು ಹೊಂದಿರುತ್ತದೆ ಮತ್ತು 28 ವರ್ಷಗಳ ಹಳೆಯ ಮರವು 67% ರಷ್ಟು ಅಧಿಕ ಗ್ರೇಡ್‌ನ ಕಟ್ಟಿಗೆಯನ್ನು ಹೊಂದಿರುತ್ತದೆ. ತೈಲದ ಮೌಲ್ಯವು ಕಟಾವು ಮಾಡಿದ ಮರಗಳ ಗುಣಮಟ್ಟ ಮತ್ತು ಗ್ರೇಡ್ ಅನ್ನು ಆಧರಿಸಿರುತ್ತದೆ. ಹಳೆಯ ಶ್ರೀಗಂಧದ ಮರಗಳು ಉತ್ತಮ ಗುಣಮಟ್ಟದ ತೈಲವನ್ನು ಹಾಗೂ ಉತ್ತಮ ಗುಣಮಟ್ಟದ ಕಟ್ಟಿಗೆಯನ್ನು ಹೊಂದಿರುತ್ತವೆ.

 

ಸಾಮಾನ್ಯವಾಗಿ 13 ಸೆಂ.ಮೀ ಗಿಂತ ಹೆಚ್ಚು ದೊಡ್ಡ ಮರಗಳು ಮತ್ತು ನೆಲದಿಂದ 130 ಸೆಂ.ಮೀ ಎತ್ತರಕ್ಕೆ ಕಾಂಡದ ಸುತ್ತಳತೆಯಲ್ಲಿ ತಿರುಳಿನ ಹೊರ ಭಾಗವು 1/6 ಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ ಮರಗಳನ್ನು ಕಟಾವು ಮಾಡಲಾಗುತ್ತದೆ. ಯಾವುದೇ ಗಾತ್ರದ ಬಿದ್ದ ಅಥವಾ ಒಣಗಿದ ಮರವು ದೀರ್ಘಕಾಲದವರೆಗೆ ತೈಲದ ಅಂಶವನ್ನು ಉಳಿಸಿಕೊಂಡಿರುತ್ತದೆ ಮತ್ತು ಅದನ್ನು ಕೂಡ ತೈಲ ಹೊರತೆಗೆಯಲು ಬಳಸಬಹುದಾಗಿದೆ. ಕತ್ತರಿಸಿದ ಟೊಂಗೆಗಳು ಮತ್ತು ಮರದ ಪುಡಿಯನ್ನು ಅಗರಬತ್ತಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

 

ಫಸಲು: ಶ್ರೀಗಂಧದ ಮರಗಳು ಅತ್ಯಂತ ನಿಧಾನವಾಗಿ ಬೆಳೆಯುತ್ತವೆ. ತಿರುಳು ರೂಪುಗೊಳ್ಳಲು ಕನಿಷ್ಠ 10 ರಿಂದ 12 ವರ್ಷಗಳು ಬೇಕಾಗುತ್ತವೆ. ಶ್ರೀಗಂಧದ ಮರದ ಬೆಳವಣಿಗೆ ದರವು ಅನುಕೂಲಕರ ವಾತಾವರಣ ಮತ್ತು ಉತ್ತಮ ಮಣ್ಣಿನ ಸ್ಥಿತಿಯಲ್ಲಿ ವರ್ಷಕ್ಕೆ 4 ಸೆಂ.ಮೀ ಇಂದ 5 ಸೆಂ.ಮೀ ಸುತ್ತಳತೆ ಹೆಚ್ಚಳವಾಗುತ್ತದೆ.

 

ಶ್ರೀಗಂಧದ ನಾಟಿಯ ವಾಣಿಜ್ಯಿಕ ಅಂಶಗಳು:

 

ಶ್ರೀಗಂಧದ ಕೃಷಿಯಲ್ಲಿ ಹೂಡಿಕೆ ಮತ್ತು ನಿರ್ವಹಣೆ ವಿಧಾನವು ಒಂದು ಎಕರೆ ಅಳತೆಯಲ್ಲಿದೆ.

 

ಇಲ್ಲಿ ನಮೂದಿಸಿದ ಅಂಕಿ ಅಂಶಗಳು ಕೇವಲ ಸೂಚಕವಾಗಿದೆ ಮತ್ತು ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಬದಲಾಗಬಹುದು.

 

ಗ್ರಿಡ್ ಗಾತ್ರ: 3 ಮೀ x 3 ಮೀ

 

ಪ್ರತಿ ಎಕರೆಗೆ ಒಟ್ಟು ಸಸ್ಯಗಳ ಸಂಖ್ಯೆ: 450

 

ಮಧ್ಯಂತರದಲ್ಲಿ ನಷ್ಟವಾಗುವ ಸಾಧ್ಯತೆ ಇರುವುದರಿಂದ ನಾಟಿಗೆ ಪಡೆದುಕೊಳ್ಳಬೇಕಾದ ಸಸ್ಯಗಳ ಸಂಖ್ಯೆ: 520

 

ಪ್ರತಿ ಮರಕ್ಕೆ ವೆಚ್ಚ (ಶ್ರೀಗಂಧದ ಸಸ್ಯ, ಆಶ್ರಯ ಸಸ್ಯ, ರಸಗೊಬ್ಬರಗಳನ್ನು ಮೇಲಿನಿಂದ ನೀಡುವುದು, ಮುಚ್ಚುವಿಕೆ ಗೊಬ್ಬರ ಇತ್ಯಾದಿ): ₹ 400/-

 

ಪ್ರತಿ ಹೊಂಡವನ್ನು ಅಗೆಯುವ ವೆಚ್ಚ: ₹ 25/-

 

ಹನಿ ನೀರಾವರಿ ಸ್ಥಾಪನೆ ವೆಚ್ಚ: ₹80,000/-

 

ಪ್ರತಿ ಎಕರೆಗೆ ಒಟ್ಟು ಸಸ್ಯ ಹಾಕುವ ವೆಚ್ಚ: ಅಂದಾಜು ₹3,00,000/-

 

ಕೃಷಿಭೂಮಿಯ ವಾರ್ಷಿಕ ನಿರ್ವಹಣೆ ವೆಚ್ಚ (ಕಸ ತೆಗೆಯುವುದು, ಕೂಲಿ, ನೀರಾವರಿ, ವಿದ್ಯುತ್ ಇತ್ಯಾದಿ): ₹2,00,000/-

 

ಪ್ರಾಜೆಕ್ಟ್‌ನ ಒಟ್ಟು ವೆಚ್ಚ, 15ನೇ ವರ್ಷದಲ್ಲಿ ಮರವನ್ನು ಕತ್ತರಿಸಲಾಗುತ್ತದೆ ಎಂದು ಊಹಿಸಿದರೆ: ₹33,00,000/-

 

ಮರವು ತೈಲವನ್ನು ಉತ್ಪಾದಿಸಲು ಆರಂಭಿಸಿದ ನಂತರ ಭದ್ರತೆ ಅಗತ್ಯವಿರುವುದರಿಂದ ಅದರ ವೆಚ್ಚವನ್ನು ಇದರಲ್ಲಿ ಸೇರಿಸಿಲ್ಲ. ಹಲವು ಕಾಲದಿಂದಲೂ, ಶ್ರೀಗಂಧ ಕಳ್ಳರ ಗಂಭೀರ ಕಾಟವನ್ನು ಎದುರಿಸಿದೆ ಮತ್ತು ವೀರಪ್ಪನ್ನಂತಹ ಕಳ್ಳಸಾಗಣೆದಾರರನ್ನು ಕಂಡಿದೆ. ಹೀಗಾಗಿ, ಸೂಕ್ತವಾದ ಭದ್ರತಾ ವ್ಯವಸ್ಥೆಯನ್ನು ಮಾಡುವುದು ಅತ್ಯಂತ ಅಗತ್ಯವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ, ಸಂಯೋಜಿತ/ಸಮುದಾಯ ಕೃಷಿ ಸ್ಕೀಮ್ಗಳು ಹೆಚ್ಚು ಸೂಕ್ತವಾಗಿರುತ್ತವೆ. ಏಕೆಂದರೆ, ಭದ್ರತೆಯ ವೆಚ್ಚವನ್ನು ಇದು ಕಡಿಮೆ ಮಾಡುತ್ತದೆ

 

ಸರಾಸರಿ ತಿರುಳಿನ ಕಟಾವು 15 ವರ್ಷಗಳಲ್ಲಿ ಪ್ರತಿ ಮರಕ್ಕೆ 10 ಕಿಲೋವರೆಗೆ ಸಿಗಬಹುದು. ಉತ್ತಮ ಮತ್ತು ಮತ್ತು ಹವಾಮಾನದ ಪರಿಸ್ಥಿತಿ ಹೊಂದಿರುವ ಕೃಷಿ ಪದ್ಧತಿಯಲ್ಲಿ ಪ್ರತಿ ಎಕರೆಗೆ 4.5 ಟನ್‌ಗಳಷ್ಟನ್ನು ನೀಡಬಹುದು. ಹೀಗಾಗಿ, 1 ಎಕರೆ ಶ್ರೀಗಂಧದ ಅರಣ್ಯವು ಪ್ರಸ್ತುತ ಬೆಲೆಯಲ್ಲಿ ₹4,50,00,000/- ಆದಾಯವನ್ನು ನೀಡುತ್ತದೆ. ಇದರಿಂದಾಗಿ 15 ವರ್ಷಗಳಲ್ಲಿ ರೈತನಿಗೆ 4.17 ಕೋಟಿ ನಿವ್ವಳ ಲಾಭ ಸಿಗುತ್ತದೆ.

 

ಜಾಗತಿಕ ಶ್ರೀಗಂಧದ ಮಾರುಕಟ್ಟೆಯು ಬೆಳೆಯುತ್ತಲೇ ಇದೆ. ಸಂತಾಲಮ್ ಆಲ್ಬಮ್ ತೈಲಕ್ಕೆ ಪ್ರತಿ ಕಿಲೋಗೆ ಅಂದಾಜು ₹1,30,000/- (ದುಬೈ ಮೂಲಕ ಲೈಸೆನ್ಸ್‌ ರಹಿತ ಉತ್ಪಾದನೆ) ಇಂದ ₹1,60,000/- (ಭಾರತದಿಂದ ಲೈಸೆನ್ಸ್‌ ಸಹಿತ ಉತ್ಪಾದನೆ), ₹1,85,000/- ವರೆಗೆ ಇದೆ.

 

ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಕೌನ್ಸಿಲ್ ಅಡಿಯಲ್ಲಿರುವ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಪ್ರಕಾರ:

 

1 ಕ್ಲಾಸ್ಭಾರತೀಯ ಶ್ರೀಗಂಧದ ತಿರುಳಿನ ಬೆಲೆಯು ಪ್ರಸ್ತುತ ಪ್ರತಿ ಕಿಲೋಗೆ ರೂ. 7,500 ಹಾಗೂ ತೈಲವು ರೂ. 1,50,000 ಪ್ರತಿ ಕಿಲೋಗೆ ಸರ್ಕಾರಿ ದರವಾಗಿದೆ. ದೇಶೀ ಮಾರುಕಟ್ಟೆಯಲ್ಲಿ, ಶ್ರೀಗಂಧದ ಬೆಲೆ ಪ್ರತಿ ಕಿಲೋಗೆ ರೂ. 16,500 ಆಗಿರುತ್ತದೆಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಯು ದೇಶೀ ಮಾರುಕಟ್ಟೆಗೆ ಹೋಲಿಸಿದರೆ ಶೇ. 15 ರಿಂದ ಶೇ. 20 ರಷ್ಟು ಅಧಿಕವಾಗಿರುತ್ತದೆ. ಪ್ರತಿ ವರ್ಷ ಇದರ ಬೆಲೆ ಶೇ. 25 ದರದಲ್ಲಿ ಹೆಚ್ಚಳವಾಗುತ್ತಿದೆ.

 

ಶ್ರೀಗಂಧದ ಭವಿಷ್ಯ:

 

ಶ್ರೀಗಂಧವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅಧಿಕ ಮೌಲ್ಯದ ಬಳಕೆಯು ಇದರ ಬೆಲೆಯ ಮೇಲೆ ಪರಿಣಾಮ ಬೀರಿದೆ ಮತ್ತು ವಿಭಿನ್ನ ಮಾರುಕಟ್ಟೆ ವಲಯ ಮತ್ತು ಪ್ರದೇಶಗಳಲ್ಲಿ ಬೇಡಿಕೆ ಕಾಯ್ದುಕೊಂಡಿದೆ. ಪರ್ಫ್ಯೂಮ್ಗಳಲ್ಲಿ ಒಂದು ಸಾಮಗ್ರಿಯಾಗಿರುವುದು, ವಿಶೇಷ ನೈಸರ್ಗಿಕ ಬಾಡಿ ಕೇರ್ ಉತ್ಪನ್ನಗಳು ಮತ್ತು ಹೊಸ ಫಾರ್ಮಾಸ್ಯುಟಿಕಲ್ಗಳು, ಅದರಲ್ಲೂ ವಿಶೇಷವಾಗಿ ಯುರೋಪಿಯನ್ ಮತ್ತು ಉತ್ತರ ಅಮೆರಿಕ ಮಾರುಕಟ್ಟೆಗಳಲ್ಲಿ, ಗಟ್ಟಿಯಾದ ಪೀಠೋಪಕರಣ, ಕೆತ್ತನೆಗಳು, ಸಾಂಪ್ರದಾಯಿಕ ಔಷಧಗಳು ಮತ್ತು ಚೀನಾ, ಕೊರಿಯಾ ಮತ್ತು ಜಪಾನ್ನಲ್ಲಿ ಧಾರ್ಮಿಕ ಬಳಕೆ, ಅತ್ತರು, ಅಂತಿಮ ಸಂಸ್ಕಾರದ ಕಟ್ಟಿಗೆ ಮತ್ತು ಭಾರತದಲ್ಲಿ ಜಗಿಯುವ ತಂಬಾಕು ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಸಾಂಪ್ರದಾಯಿಕ ಬಳಕೆಗೆ ಇದನ್ನು ಬಳಸಲಾಗುತ್ತದೆ.

 

2014 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಶ್ರೀಗಂಧದ ತೈಲಕ್ಕೆ ಜಾಗತಿಕ ಬೇಡಿಕೆಯು 10,000 ಮೆ.ಟ ಗೆ ತಲುಪಲಿದೆ ಎಂದು ಊಹಿಸಲಾಗಿದೆ ಮತ್ತು ಚೀನಾಗೆ 2040 ರ ವೇಳೆಗೆ 5000  ಮೆ.ಟ ಬೇಕಾಗಬಹುದು ಎಂದು ಊಹಿಸಲಾಗಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಈ ಕೊರತೆಯಿಂದಾಗಿ, ಪ್ರತಿ ವರ್ಷ ಶ್ರೀಗಂಧದ ಬೆಲೆ ಸರಾಸರಿ ಶೇ. 25 ರಷ್ಟು ಏರಿಕೆಯಾಗಲಿದೆ ಎಂದು ಊಹಿಸಲಾಗಿದೆ. ಮರದ ಹುಡಿಯೂ ಸೇರಿದಂತೆ ಯಾವುದೂ ತ್ಯಾಜ್ಯವಲ್ಲದ್ದರಿಂದ, ಮರದ ಪ್ರತಿಯೊಂದು ತುಣುಕೂ ಮಾರಾಟವಾಗುತ್ತದೆ. ಶ್ರೀಗಂಧದ ನಾಟಿಯನ್ನು ಉತ್ತೇಜಿಸುವುದಕ್ಕೆ ಸರ್ಕಾರ ತನ್ನ ನಿಯಮಗಳಲ್ಲಿ ಪ್ರಸ್ತುತ ವಿನಾಯಿತಿ ನೀಡಿರುವುದರಿಂದ, ಅತ್ಯಂತ ಆಕರ್ಷಕ ಉದ್ಯಮ ಎಂದು ಇದನ್ನು ಪರಿಗಣಿಸಬಹುದಾಗಿದೆ.